ಕೈಲಾಶ್ ಖೇರ್ (: کیلاش کھیر) (೧೯೭೩ ರ ಜುಲೈ ೭ ರಂದು ಜನನ) ಅವರು ಭಾರತೀಯ ಜಾನಪದ ಸಂಗೀತದಿಂದ ಆಗಾಗ್ಗೆ ಪ್ರಭಾವಿತವಾದ ವೈವಿಧ್ಯ ಸಂಗೀತ ಶೈಲಿಯೊಂದಿಗಿನ ಕಾಶ್ಮೀರಿ ಭಾರತೀಯಪಾಪ್-ರಾಕ್ ಸಂಗೀತಗಾರರಾಗಿದ್ದಾರೆ. == ವೃತ್ತಿಜೀವನ == ವ್ಯವಹಾರದಲ್ಲಿ ತಳವೂರಲು ಕಷ್ಟಪಟ್ಟ ಬಳಿಕ ಇವರು ಸಂಗೀತ ಕ್ಷೇತ್ರದಲ್ಲಿ ಪ್ರಯತ್ನವನ್ನು ಮಾಡಿದರು. ಮುಂಬಯಿಗೆ ತೆರಳಿದ ನಂತರ, ಇವರು ಹಾಡಿದ ಅಂದಾಜ್ ಚಿತ್ರದಲ್ಲಿನ ರಬ್ಬಾ ಇಷ್ಕ್ ನಾ ಹೋವೆ ಎಂಬ ಗೀತೆಯು ಜನಪ್ರಿಯವಾಯಿತು. ೨೦೦೨ ರಲ್ಲಿ, ಅಷ್ಟು ಸುಪ್ರಸಿದ್ಧವಲ್ಲದ ವೈಸಾ ಭೀ ಹೋತಾ ಹೈ ಭಾಗ ಚಲನಚಿತ್ರದಲ್ಲಿ ಇವರು ಹಾಡಿದ ಅಲ್ಲಾಹ್ ಕೆ ಬಂದೆ ಹಾಡು ಇವರ ಹೆಸರನ್ನು ಮನೆಮಾತಾಗಿಸಿತು. ಈ ಹಿಂದೆ ಮುಂಬಯಿ ಬ್ಲಾಕ್ನೊಂದಿಗೆ ಗುರುತಿಸಿಕೊಂಡಿದ್ದ ಮುಂಬಯಿಯ ಸಂಗೀತ ಸಹೋದರರಾದ ನರೇಶ್ ಮತ್ತು ಪರೇಶ್ ಅವರನ್ನು ಕೈಲಾಸ ಬ್ಯಾಂಡ್ ಒಳಗೊಂಡಿತ್ತು. ಖೇರ್ ಅವರದ್ದು ಅನನ್ಯವಾದ ಭಾವಪೂರ್ಣವಾದ, ಸಹಜವಾದ, ಉಚ್ಚ-ಸ್ವರದ ಧ್ವನಿಯಾಗಿತ್ತು. ಇವರು ಬಾಲಿವುಡ್ ಚಿತ್ರ : ದಲ್ಲಿ ಹಲವು ಗೀತೆಗಳನ್ನು ಹಾಡಿದರು, ಅದರಲ್ಲಿ ಅವರು ಚಿತ್ರ ಪಾತ್ರದಲ್ಲೂ ಸಹ ಕಾಣಿಸಿಕೊಂಡರು. ಇವರ ಇತರ ಬಾಲಿವುಡ್ ನಟನೆಗಳಲ್ಲಿ ಕಾರ್ಪೊರೇಟ್ ಚಿತ್ರದಲ್ಲಿನ 'ಓ ಸಿಕಂದರ್' ಗೀತೆ ಸಹ ಸೇರಿದೆ. ಕೈಲಾಸ ಬ್ಯಾಂಡ್‌ನವರ ತೇರಿ ದಿವಾನಿ ಹೆಸರಿನ ಆಲ್ಬಮ್‌ನ ಅದೇ ಹೆಸರಿನ ಇವರ ಗೀತೆ ಮತ್ತು ಪ್ರಮುಖವಾಗಿ ಸಲಾಮ್-ಇ-ಇಷ್ಕ್ ಚಿತ್ರದ ಯಾ ರಬ್ಬಾ ಗೀತೆಯು ದಾಖಲೆಯ ಮಾರಾಟ ಕಂಡಿತು. ಇವರ ಇತ್ತೀಚೆಗೆ ಕನ್ನಡ ಚಿತ್ರೋದ್ಯಮದಲ್ಲಿನ ಅವರ ಪ್ರಯತ್ನವು ಭಾರಿ ಯಶಸ್ಸನ್ನು ಕಂಡಿತು. "ಜಂಗ್ಲೀ" ಚಿತ್ರದಲ್ಲಿನ ಇವರ "ಹಳೆ ಪಾತ್ರೆ" ಗೀತೆಯ ಬಗ್ಗೆ ವಿಶೇಷವಾಗಿ ಹೇಳಲೇಬೇಕು ಮತ್ತು ಇದು ಪ್ರೇಕ್ಷಕರಲ್ಲಿ ಭಾರಿ ಜನಪ್ರಿಯವಾಯಿತು. ೨೦೦೭ ರಲ್ಲಿ, ಖೇರ್ ಅವರು "ದಿ ಇನ್‌ಕ್ರೆಡೆಬಲ್ಸ್" ಎಂಬ ಹೆಸರಿನ ಉತ್ತರ ಅಮೇರಿಕ ಸಂಗೀತ ಪ್ರವಾಸದಲ್ಲಿ ಆಶಾ ಭೋಂಸ್ಲೆ, ಸೋನು ನಿಗಮ್ ಮತ್ತು ಕುನಾಲ್ ಗಂಜಾವಾಲಾ ಅವರೊಡಗೂಡಿ ಭಾಗವಹಿಸಿದರು. ಸೋನಿ ಟಿವಿಯಲ್ಲಿ ಪ್ರಸಾರವಾದ ಇಂಡಿಯನ್ ಐಡಲ್ ಎಂಬ ಪ್ರತಿಭಾವಂತಹ ಗಾಯನ ಸ್ಪರ್ಧೆಯಲ್ಲಿ ಇವರು ತೀರ್ಪುಗಾರರಾಗಿದ್ದರು. {{|ಹಿನ್ನೆಲೆ ಸಂಗೀತವು ಅವಕಾಶದಂತೆ ಒದಗಿ ಬಂತು. ನಾನು ವ್ಯವಹಾರದಲ್ಲಿ ಎಲ್ಲವನ್ನೂ ಕಳೆದುಕೊಂಡೆ. ಆಗಲೇ ನನ್ನ ಸ್ನೇಹಿತರು ಮುಂಬಯಿಯಲ್ಲಿ ಅವಕಾಶಕ್ಕೆ ಪ್ರಯತ್ನಿಸಲು ತಿಳಿಸಿದರು ಮತ್ತು ಅಲ್ಲಿಯೇ ನಾನು ಸಂಗೀತ ರಚನೆಕಾರರಾದ ಪರೇಶ್ ಮತ್ತು ನರೇಶ್ ಅವರೊಂದಿಗೆ ಖಾಸಗಿ ಆಲ್ಬಮ್‌ ಅನ್ನು ಧ್ವನಿಮುದ್ರಿಸಿದೆ. ಒಟ್ಟಿಗೆ ಇದೀಗ ನಾವು ಕಿಲ್ಲರ್ ಎಂದರು ಕರೆಯಲಾಗುವ ಸಂಗೀತ ಬ್ಯಾಂಡ್‌ ಅನ್ನು ಪ್ರತಿನಿಧಿಸುತ್ತಿದ್ದೇವೆ. ಎ ಆರ್ ರೆಹಮಾನ್ ಹೇಳುವಂತೆ ಅವರು "ಎಂಟಿವಿಯೊಂದಿಗಿನ ಕುರ್ಕುರೆ ದೇಸಿ ಬೀಟ್ಸ್ ರಾಕ್ ಆನ್" ಪ್ರದರ್ಶನದ ತೀರ್ಪುಗಾರರೂ ಸಹ ಆಗಿದ್ದು, ಅಲ್ಲಿ ಅವರು ಪ್ರತಿಸ್ಪರ್ಧಿಗಳ "ದೇಸಿಪನ್ ಸಾಮರ್ಥ್ಯ" ವನ್ನು ನಿರ್ಧರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಖೇರ್ ಅವರು ಕಲರ್ಸ್ ಚಾನೆಲ್‌ನಲ್ಲಿ ಪ್ರಸಾರವಾಗುವ ವಿಶೇಷವಾಗಿ ಐಪಿಎಲ್ ೨೦೧೦ ಗಾಗಿ ಸಿದ್ಧಪಡಿಸಲಾಗಿರುವ, ಐಪಿಎಲ್ ಪಂದ್ಯಗಳು ನಡೆಯುತ್ತಿರುವ ಸ್ಟೇಡಿಯಂಗಳಿಂದ ನೇರಪ್ರಸಾರವಾಗುವ ರಿಯಾಲಿಟಿ ಶೋ "ಐಪಿಎಲ್ ರಾಕ್‌ಸ್ಟಾರ್" ನಲ್ಲಿ ಗಾಯಕರಾದ ಸುಖ್ವಿಂದರ್ ಸಿಂಗ್ ಮತ್ತು ಹರ್ದ್ ಕೌರ್ ಅವರೊಂದಿಗೆ ತೀರ್ಪುಗಾರರಲ್ಲಿ ಓರ್ವರಾಗಿದ್ದಾರೆ. ಇದೀಗ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ರಿಯಾಲಿಟಿ ಶೋ 'ಸಂಗಿನಿ' ಗಾಗಿ ಇವರು ಇತ್ತೀಚೆಗೆ ಹಾಡೊಂದನ್ನು ಧ್ವನಿಮುದ್ರಿಸಿದ್ದಾರೆ. ಇವರು ಸೂಫಿ ಗಾಯಕರೆಂದು ಸಹ ಹೆಸರಾಗಿದ್ದು, ಇವರ ಶೈಲಿಯು ಸೂಫಿ ಸಿದ್ಧಾಂತದ ಪ್ರಭಾವಕ್ಕೊಳಪಟ್ಟಿದೆ ಮತ್ತು ಧ್ವನಿಯು ಅತೀವ ನಯವಲ್ಲದ ಮತ್ತು ತಾಜಾವಾಗಿದೆ. === ವೈಯಕ್ತಿಕ ಜೀವನ === == ಧ್ವನಿಮುದ್ರಿಕೆ ಪಟ್ಟಿ == == ಪ್ರಶಸ್ತಿಗಳು == ೨೦೧೭ರಲ್ಲಿ ಪದ್ಮಶ್ರೀ ಪ್ರಶಸ್ತಿ. == ಇದನ್ನೂ ನೋಡಿ == ಕೈಲಾಸ (ಬ್ಯಾಂಡ್) == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಕೈಲಾಶ್ ಖೇರ್‌ ಅವರೊಂದಿಗೆ ಸಂದರ್ಶನ 'ನ ಕೈಲಾಶ್ ಖೇರ್ ಫಿಲ್ಮೋಗ್ರಫಿ 2007-01-21 ವೇಬ್ಯಾಕ್ ಮೆಷಿನ್ ನಲ್ಲಿ. @